ಪಾವಗಡ 2023 ಜೆಡಿಎಸ್ ಅಭ್ಯರ್ಥಿ ಮಾಜಿ ಶಾಸಕ ಕೆ.ಎಮ್. ತಿಮ್ಮರಾಯಪ್ಪ ಜಿಲ್ಲಾಧ್ಯಕ್ಷ ಆರ್. ಸಿ. ಅಂಜನಪ್ಪ ಘೋಷಣೆ

ಪಾವಗಡ: ಪಟ್ಟಣದ ಎಸ್. ಎಸ್. ಕೆ .ಬಯಲು ರಂಗ ಮಂದಿರದಲ್ಲಿ ಯುವ ಜನತಾದಳ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಜಿಲ್ಲಾ ಜೆಡಿಎಸ್ ಅಧ್ಯಕ್ಷರಾದ ಆರ್. ಸಿ ಆಂಜಿನಪ್ಪನವರು ಮಾತನಾಡಿ ಪಾವಗಡ ವಿಧಾನಸಭೆಯ ಮುಂದಿನ 2023ರ ಚುನಾವಣೆಗೆ ನಮ್ಮ ಜೆಡಿಎಸ್ ಪಕ್ಷದ ಅಧಿಕೃತ ಅಭ್ಯರ್ಥಿ ಮಾಜಿ ಶಾಸಕ ಕೆ.ಎಮ್. ತಿಮ್ಮರಾಯಪ್ಪ ಎಂದು ಘೋಷಣೆ ಮಾಡಿ. ಮಾತನಾಡಿದ ಅವರು ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಜೆಡಿಎಸ್ ಪಕ್ಷ ಗೆಲ್ಲುವುದು ಖಚಿತವಾಗಿದ್ದು ಯುವ ಜನತಾದಳದ ಪದಾಧಿಕಾರಿಗಳು ಕುಮಾರಸ್ವಾಮಿಯ ಅಭಿವೃದ್ಧಿ ಕಾರ್ಯಗಳನ್ನು ಮಾಜಿ ಶಾಸಕ ಕೆ. ಎಮ್. ತಿಮ್ಮರಾಯಪ್ಪ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಜನತೆಗೆ ತಿಳಿಸುವ ಮೂಲಕ ತಾಲೂಕಿನಲ್ಲಿ ಜಾತ್ಯಾತೀತ ಜನತಾದಳವನ್ನು ಗೆಲ್ಲಿಸುವ ಶಕ್ತಿ ತುಂಬಬೇಕೆಂದು ಯುವ ಜನತಾದಳದ ಕಾರ್ಯಕರ್ತರಿಗೆ ಕರೆ ನೀಡಿದರು

ಯುವ ಜನತಾದಳ ಕಾರ್ಯಕರ್ತರನ್ನು ಸಭೆಯನ್ನು ಉದ್ದೇಶಿಸಿ ಮಾಜಿ ಶಾಸಕ ಕೆಎಂ ತಿಮ್ಮರಾಯಪ್ಪ ಅವರು ಮಾತನಾಡಿ ಮುಂದಿನ ದಿನಗಳಲ್ಲಿ ಪಾವಗಡ ತಾಲೂಕಿಗೆ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರನ್ನು ಬರಮಾಡಿಕೊಂಡು ಯುವ ಜನತಾದಳದ ಯುವಕರು ತಾಲೂಕಿನಲ್ಲಿ ಪಕ್ಷವನ್ನು ಸಂಘಟಿಸಿ 2023ರ ಚುನಾವಣೆಯಲ್ಲಿ ಜಯ ಜಯದ ಕಡೆಗೆ ನಮ್ಮ ಗುರಿ ಅನ್ನುವ ಉದ್ದೇಶವನ್ನು ಇಟ್ಟುಕೊಂಡು ಪಕ್ಷ ಸಂಘಟಿಸಬೇಕೆಂದು ಎಂದು ಕರೆ ನೀಡಿದರು

ಕಾರ್ಯಕ್ರಮದಲ್ಲಿ ಯುವ ಜನತಾದಳ ಅಧ್ಯಕ್ಷ ಮಂಜುನಾಥ್ ಚೌಧರಿ ಅಧ್ಯಕ್ಷತೆಯನ್ನು ವಹಿಸಿದ್ದರು ಹಾಗೂ ರಾಜ್ಯ ಜೆಡಿಎಸ್ ಹಿರಿಯ ಮುಖಂಡರಾದ ತಿಮ್ಮ ರೆಡ್ಡಿ. ಅಧ್ಯಕ್ಷರಾದ ಬಲರಾಮ್ ರೆಡ್ಡಿ. ಕಾರ್ಯಾಧ್ಯಕ್ಷ ಎನ್. ಎ. ಈರಣ್ಣ .ವಕ್ತಾರರಾದ ಅಕ್ಕಲಪ್ಪ ನಾಯ್ಡು. ಹಿರಿಯ ಮುಖಂಡರಾದ ಮಾನಂ ವೆಂಕಟ ಸ್ವಾಮಿ .ರಾಮಕೃಷ್ಣ ರೆಡ್ಡಿ. ಕೋಟಗುಡ್ಡ ಅಂಜಪ್ಪ. ರಾಧಾ ರಾಜ ರಾಜಗೋಪಾಲ್. ಕಾರ್ಯದರ್ಶಿ ಅಂಜನ ನಾಯಕ. ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸೊಗೋಡು ವೆಂಕಟೇಶ್. ರಂಗಸಮುದ್ರ ಗಿರಿರಾಜು. ಯುವ ಮುಖಂಡ ಮನು ಮಹೇಶ್. ಗುಟ್ಟಹಳ್ಳಿ ಮಣಿ. ಕಾವಲಗೆರೆ ರಾಮಾಂಜಿನಪ್ಪ. ಯೂನಿಸ್ .ಗಂಗಾಧರ ನಾಯ್ಡು. ಪುರಸಭಾ ಸದಸ್ಯರಾದ ಗೋರ್ತಿ. ನಾಗರಾಜ್. ಮುಂತಾದವರು ಭಾಗವಹಿಸಿದ್ದರು

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!